ಖಾತೆ ಮತ್ತು ಡೇಟಾ ಅಳಿಸುವುದು
ನಿಮ್ಮ myStaze ಖಾತೆಯನ್ನೂ ಅದಕ್ಕೆ ಜೋಡಿಸಿರುವ ವೈಯಕ್ತಿಕ ಡೇಟಾವನ್ನೂ ಅಳಿಸುವುದು ಹೇಗೆ ಎಂಬುದು ಈ ಪುಟದಲ್ಲಿದೆ. ಬ್ರೌಸರ್‌ನಲ್ಲಾಗಲಿ ಆ್ಯಪ್‌ನಲ್ಲಾಗಲಿ ಅಳಿಸಲು ಶುಲ್ಕವಿಲ್ಲ.
ಇಲ್ಲಿಂದಲೇ ಅಳಿಸಿ
ಸೈನ್ ಇನ್ ಮಾಡಿ ಕೆಳಗೆ ದೃಢೀಕರಿಸಿ. ಅಳಿಸುವಿಕೆ ಆ ಕ್ಷಣವೇ ಜಾರಿಗೆ ಬರುತ್ತದೆ.
ಸೈನ್ ಇನ್ ಇಲ್ಲದೆ
myStaze ನಲ್ಲಿ ಬಳಸುವ ವಿಳಾಸದಿಂದ "Data Deletion Request" ಎಂಬ ವಿಷಯದೊಂದಿಗೆ ನಮಗೆ ಇಮೇಲ್ ಮಾಡಿ. 30 ದಿನಗಳೊಳಗೆ ಅಳಿಸುತ್ತೇವೆ.
ಏನು ಹೋಗುತ್ತದೆ, ಏನು ಉಳಿಯುತ್ತದೆ
ನಿಮ್ಮ ಲಾಗಿನ್, ಇಮೇಲ್ ವಿಳಾಸ, ಖರೀದಿಸಿದ ಟಿಕೆಟ್‌ಗಳ ನಂಟು, ಚಾಟ್ ಸಂದೇಶಗಳನ್ನು ಅಳಿಸುತ್ತೇವೆ.
ಖರೀದಿಯ ದಾಖಲೆಗಳನ್ನು ಲೆಕ್ಕಪತ್ರ ಕಾನೂನು ಹೇಳುವಷ್ಟು ಕಾಲ, ಹೆಚ್ಚೆಂದರೆ ಆರು ವರ್ಷ ಇಟ್ಟುಕೊಳ್ಳುತ್ತೇವೆ. ಅವು ಇನ್ನು ಯಾವ ಖಾತೆಗೂ ಜೋಡಿಸಿರುವುದಿಲ್ಲ.
ಅಳಿಸುವಿಕೆ ಆ ಕ್ಷಣವೇ ಜಾರಿಗೆ ಬರುತ್ತದೆ. ಬ್ಯಾಕಪ್‌ನಲ್ಲಿ ಉಳಿದದ್ದು 30 ದಿನಗಳೊಳಗೆ ಅಳಿಯುತ್ತದೆ.
myStaze ನಲ್ಲಿ ಪ್ರಸಾರಗಳನ್ನು ನೀವೇ ಆಯೋಜಿಸುತ್ತಿದ್ದರೆ ನಮಗೆ ಇಮೇಲ್ ಮಾಡಿ. ಕೊನೆಯ ಪಾವತಿ ಇತ್ಯರ್ಥವಾದ ಮೇಲೆ ಆಯೋಜಕ ಖಾತೆಯನ್ನು ಮುಚ್ಚುತ್ತೇವೆ.